ಮಹೂರ್ತ ಟ್ರೇಡಿಂಗ್.. ಹೂಡಿಕೆದಾರರ ಜೇಬು ತುಂಬಿಸಿದ ದೀಪಾವಳಿ..! - ದೀಪಾವಳಿ
ಮನೆ ಮನವನು ಬೆಳಗುವ ದೀಪಾವಳಿಯನ್ನು ಇಂದು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೀಪಾವಳಿ ಹಿಂದೂ ಸಂಪ್ರದಾಯದ ಪ್ರಕಾರ ಶ್ರೀಮಂತಿಕೆ ಹೆಚ್ಚಿಸುವ ಸಮೃದ್ಧಿಯ ಹಬ್ಬ ಎಂಬ ನಂಬಿಕೆ ಇದೆ. ಆರ್ಥಿಕತೆಯಲ್ಲಿನ ದುರ್ಬಲವಾದ ಉಪಭೋಗದ ಬೇಡಿಕೆ, ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ವಾಣಿಜ್ಯ ಸಮರ, ಕೊಲ್ಲಿ ರಾಷ್ಟ್ರಗಳಲ್ಲಿನ ಉದ್ವಿಗ್ನತೆ, 2019ರ ಬಜೆಟ್ಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪ ನಡುವೆ ಮುಹೂರ್ತ ಟ್ರೇಡಿಂಗ್ ಸಕರಾತ್ಮಕವಾಗಿ ವಹಿವಾಟು ನಡೆಸಿದೆ.