ಸಮುದ್ರ ಮಂಥನದ ಲಕ್ಷ್ಮಿಗೂ ಮುಂಬೈ ಷೇರುಪೇಟೆಗೂ ಇರುವ ನಂಟು ಏನು? - ಸಮುದ್ರ ಮಂಥನ
ದೀಪಾವಳಿ ಬರೀ ಹಬ್ಬವಲ್ಲ.. ನಮ್ಮ ಸಂಸ್ಕೃತಿಯ ಸಾರ.. ಹಿರಿಯರು ಕಿರಿಯರು, ಬಡವ ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರೂ ಸಂಭ್ರಮಿಸುವ ಹಬ್ಬ. ಬದುಕಿನ ಅಂಧಕಾರವ ತೊಡೆದು ಸಂತೋಷದ ಬೆಳಕನ್ನು ಚೆಲ್ಲುವ ಸಂಭ್ರಮವೇ ದೀಪಾವಳಿ. ಪ್ರತಿ ದೀಪಾವಳಿಗೆ ಲಕ್ಷ್ಮಿ, ಗಣೇಶ, ಕುಬೇರನನ್ನು ವ್ಯಾಪಾರಿಗಳು ಭಕ್ತಿ ಭಾವದಿಂದ ಪೂಜಿಸುತ್ತಾರೆ. ಸಮಸ್ತ ನಾಡಿನ ಜನತೆ ತಮಗೆ ಐಶ್ವರ್ಯ, ಸಂಪತ್ತು, ಸಮೃದ್ಧಿ, ಸಂತೋಷ, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತಾರೆ. ಜ್ಞಾನ ದೀಪದ ಹಬ್ಬ ದೀಪಾವಳಿಯೂ ವ್ಯವಹಾರದ ಉದ್ಯಮಕ್ಕೂ ನಿಕಟ ಸಂಪರ್ಕ ಹೊಂದಿದೆ. ದೈನಂದಿನ ವಹಿವಾಟಿನಲ್ಲಿ ಯಶಸ್ಸು ತಂದು ಕೊಡುವಂತೆ ವ್ಯಾಪಾರಿಗಳು ಕೋರಿಕೊಳ್ಳುತ್ತಾರೆ.