ಮಾರುಕಟ್ಟೆ ರೌಂಡಪ್: 10 ದಿನಗಳ ಗೂಳಿಯ ನಾಗಲೋಟಕ್ಕೆ ಬಿಗ್ ಬ್ರೇಕ್- 1,066 ಅಂಕ ಕುಸಿದ ಸೆನ್ಸೆಕ್ಸ್
ಮುಂಬೈ: ಆರ್ಐಎಲ್ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ಷೇರುಗಳ ಇತ್ತೀಚಿನ ಗಳಿಕೆ ದಾಖಲಿಸಿದ್ದರ ನಡುವೆಯೂ ದುರ್ಬಲ ಜಾಗತಿಕ ಸೂಚನೆಗಳು ಹಾಗೂ ಲಾಭ ಬುಕ್ಕಿಂಗ್ ಮಧ್ಯೆ ದೇಶೀಯ ಷೇರು ಮಾರುಕಟ್ಟೆಯು ಗುರುವಾರದಂದು ಮಾರಾಟದ ಒತ್ತಡಕ್ಕೆ ಒಳಗಾಯಿತು. ದಿನದ ವಹಿವಾಟು ಅಂತ್ಯದ ವೇಳೆ ಸೆನ್ಸೆಕ್ಸ್ 1,066 ಅಂಕ ಅಥವಾ ಶೇ 2.61ರಷ್ಟು ಕುಸಿದು 39,728 ಮಟ್ಟದಲ್ಲಿ ಕೊನೆಗೊಂಡರೇ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 291 ಅಂಕ ಅಥವಾ ಶೇ 2.43ರಷ್ಟು ಇಳಿಕೆಯೊಂದಿಗೆ 11,680 ಅಂಕಗಳಿಗೆ ಸ್ಥಿರವಾಯಿತು.