ಪ್ರತೀಕಾರಕ್ಕೆ ಪ್ರತೀಕಾರ ಸಂದೇಶವಲ್ಲ ಅಂತಿದೆ ಅಮೆರಿಕ: ಸಂಘರ್ಷ ಸಂಧಾನದಲ್ಲಿ ಭಾರತ ಭಾಗಿಯಾಗುವುದೇ? - ಯುಎಸ್ ವಾಯುನೆಲೆ
ಇರಾನ್ ಸೇನಾ ಕಮಾಂಡರ್ ಖಾಸಿಮ್ ಸುಲೇಮಾನಿ ಹತ್ಯೆ ಬಳಿಕ ಅಮೆರಿಕ ಮತ್ತು ಇರಾನ್ ನಡುವಿನ ವೈಮನಸ್ಯ ತಣ್ಣಗಾಗುವ ಲಕ್ಷಣ ಗೋಚರಿಸುತ್ತಿಲ್ಲ. ಒಂದು ರೀತಿಯಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ರಣೋತ್ಸಾಹ ಎದ್ದು ಕಾಣುತ್ತಿದೆ. ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ಇರಾನ್, ಜನವರಿ 7ರಂದು ದಾಳಿ ನಡೆಸಿದ ಬೆನ್ನೆಲ್ಲೆ ಮತ್ತೊಮ್ಮೆ ಜನವರಿ 8ರಂದು ತಡರಾತ್ರಿಯೂ ಯುಎಸ್ ವಾಯುನೆಲೆ ಸೇರಿದಂತೆ ರಾಯಭಾರ ಕಚೇರಿಗಳಿರುವ ಬಾಗ್ದಾದ್ ಗ್ರೀನ್ಝೋನ್ ಮೇಲೂ 16 ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ. ಈ ದಾಳಿಯನ್ನು ಅಮೆರಿಕ ರಕ್ಷಣಾ ಇಲಾಖೆಯೂ ಸ್ಪಷ್ಟಪಡಿಸಿದೆ. ಇಷ್ಟೆಲ್ಲಾ ಆದರೂ ಇದೀಗ ಅಮೆರಿಕ ವಿಶ್ವಸಂಸ್ಥೆ ಕದ ತಟ್ಟಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದೆ.