ನಾಡಹಬ್ಬದಲ್ಲಿ ಸಾಂಪ್ರದಾಯಿಕ ದಾಂಡಿಯಾ ನೃತ್ಯ - ನಾಡಹಬ್ಬ ದಸರಾ
ನಾಡಹಬ್ಬ ದಸರಾ ಅಂಗವಾಗಿ ಹುಬ್ಬಳ್ಳಿಯ ಅಕ್ಷಯ ಪಾರ್ಕ್ ಬಡಾವಣೆಯಲ್ಲಿ ಒಂಬತ್ತು ದಿನಗಳ ಕಾಲ ದೇವಿ ಆರಾಧನೆಯೊಂದಿಗೆ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ದಾಂಡಿಯಾ ನೃತ್ಯ ನೋಡುಗರ ಗಮನ ಸೆಳೆಯಿತು. ಮಕ್ಕಳು, ಮಹಿಳೆಯರು ಅತ್ಯುತ್ಸಾಹದಿಂದ ದಾಂಡಿಯಾ ನೃತ್ಯದಲ್ಲಿ ಪಾಲ್ಗೊಂಡಿದ್ದರು. ಸತತ ಒಂಬತ್ತು ದಿನಗಳ ಕಾಲ ದೇವಿಯನ್ನ ಆರಾಧಿಸಿ ಮುತ್ತೈದೆಯರು ಪರಸ್ಪರರ ಉಡಿ ತುಂಬಿದರು.