ಈಟಿವಿ ಭಾರತ ಜೊತೆ ಫಲಿತಾಂಶದ ಸಂತಸ ಹಂಚಿಕೊಂಡ ಉಡುಪಿ ಸಾಧಕಿ ಸ್ವಾತಿ - undefined
ಉಡುಪಿ: ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದಲ್ಲೇ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ. ಉಡುಪಿಯ ಸ್ವಾತಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 592 ಅಂಕ ಪಡೆದಿರುವ ಸ್ವಾತಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ. ಉಡುಪಿ ಅಂಬಾಗಿಲು ಗಿರಿಜಾ ಮತ್ತು ಉದಯ್ ಶಂಕರ್ ನಾಯಕ್ ದಂಪತಿಯ ಪುತ್ರಿ ಅವರಿಗೆ ಜಿಲ್ಲೆಯಾದ್ಯಂತ ಶುಭಾಶಯಗಳು ಹರಿದುಬಂದಿವೆ. ತಮ್ಮ ಸಂತಸವನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ ಸ್ವಾತಿ.