ಕರ್ನಾಟಕ

karnataka

ETV Bharat / videos

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಕಿಗಾಹುತಿಯಾದ ಕಾರು... ಚಾಲಕ ಪಾರು! - Latest Accident In Shiradi

🎬 Watch Now: Feature Video

By

Published : Jan 4, 2020, 6:37 PM IST

ಶಿರಾಡಿ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಕೊಡ್ಡೇಲು ಎಂಬಲ್ಲಿ ಮಾರುತಿ 800 ಕಾರೊಂದು ಆಕಸ್ಮಿಕವಾಗಿ ಬೆಂಕಿಗೆ ತಗುಲಿ ದಿಢೀರ್​ ಆಗಿ ಹೊತ್ತಿ ಉರಿದಿದೆ. ಕಡಬ ತಾಲೂಕು ರಾಮಕುಂಜ ನಿವಾಸಿ ಪ್ರವೀಣ್ ಡಿಸೋಜ್​​ ಬೆಂಗಳೂರಿನಿಂದ ರಾಮಕುಂಜದ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಾಹನದಲ್ಲಿ ಏಕಾಏಕಿ ಹೊಗೆ ಆವರಿಸಿರುವುದನ್ನು ಗಮನಿಸಿದ ಪ್ರವೀಣ್ ಕಾರಿನಿಂದ ಹೊರಗಡೆ ಇಳಿದಿದ್ದಾರೆ. ಇದರಿಂದಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣವಾಗಿ ನಾಶವಾಗಿದೆ. ನೆಲ್ಯಾಡಿ ಹೊರಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ABOUT THE AUTHOR

...view details