ಮೈಸೂರಿನ ಮುಜರಾಯಿ ಇಲಾಖೆಗೆ ಸೇರಿದ ದೇಗುಲಗಳಲ್ಲೂ ಮಳೆರಾಯನಿಗೆ ವಿಶೇಷ ಪೂಜೆ - undefined
ರಾಜ್ಯ ಸರ್ಕಾರದ ಅಧಿಸೂಚನೆ ಹಿನ್ನೆಲೆಯಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ಸಮೃದ್ಧ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ಯ ಸರ್ಕಾರದ ಅಧಿಕೃತ ಸೂಚನೆಯ ಹಿನ್ನಲೆಯಲ್ಲಿ ಈ ವರ್ಷ ಬರಗಾಲ ಕಳೆದು ಒಳ್ಳೆಯ ಮಳೆ ಬೆಳೆ ಅಗಲಿ ಎಂದು ಸರ್ಕಾರಿ ವ್ಯಾಪ್ತಿಯ ಮುಜರಾಯಿ ಇಲಾಖೆಗೆ ಸೇರಿದ ಪ್ರಸಿದ್ಧ ದೇವಾಲಯಗಳಲ್ಲಿ ಇಂದು ಬ್ರಾಹ್ಮೀ ಮುಹೂರ್ತದಲ್ಲಿ ಚಾಮುಂಡಿ ದೇವಾಲಯ ಹಾಗೂ ಅರಮನೆಯ ಆವರಣದಲ್ಲಿರುವ ತ್ರಿನೇಶ್ವರ ಸ್ವಾಮಿ ದೇವಾಲಯಗಳಲ್ಲಿ ಅಭಿಷೇಕ, ಪೂಜೆ ಹಾಗೂ ಹೋಮ ನಡೆಸುವ ಮೂಲಕ ಮಳೆಗಾಗಿ ಪ್ರಾರ್ಥನೆ ಮಾಡಲಾಯಿತು.