ಕುಷ್ಟಗಿ: ರಾಯರ ಮಠದಲ್ಲಿ ಋಗ್ವೇದ ಸಂಹಿತಾ ಯಾಗ - ಶ್ರೀರಾಘವೇಂದ್ರ ರಾಯರ ಮಠ
ಕುಷ್ಟಗಿ: ಕುಷ್ಟಗಿ ಪಟ್ಟಣದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಋಗ್ವೇದ ಸಂಹಿತಾ ಪಾಠದ ಮಂಗಳ ಮಹೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಮಂತ್ರಾಲಯದ ಶ್ರೀಸುವಿದ್ಯೆಂದ್ರ ತೀರ್ಥ ಶ್ರೀಪಾದಂಗಳ ಸಾನಿಧ್ಯದಲ್ಲಿ ಋಗ್ವೇದ ಸಂಹಿತಾ ಪಾಠದ ಮಂಗಳ ಮಹೋತ್ಸವ ಮತ್ತು ಋಗ್ವೇದ ಸಂಹಿತಾ ಯಾಗ ನೆರವೇರಿತು. ಶ್ರೀರಾಘವೇಂದ್ರ ರಾಯರ ಮಠದಲ್ಲಿ ಬೆಳಗ್ಗೆ ಕಲಶ ಪ್ರತಿಷ್ಠಾಪನೆ, ಸಾಮೂಹಿಕ ಪಾದಪೂಜೆ, ಮುದ್ರಾಧಾರಣೆ, ಪೂರ್ಣಾಹುತಿ ನೆರವೇರಿತು. ನಂತರ ಯತಿದ್ವಯರ ಬೃಂದಾವನಗಳಿಗೆ ಶ್ರೀಸುವಿಧ್ಯೆಂದ್ರ ತೀರ್ಥ ಶ್ರೀಪಾದಂಗಳಿಂದ ಕಲಶಾಭಿಷೇಕ ಮತ್ತು ಪಂಚಾಮೃತಾಭಿಷೇಕ ನೆರವೇರಿತು. ಋಗ್ವೇದ ಸಂಹಿತಾಪಾಠದ ಮಂಗಳ ಮತ್ತು ಗುರುಗಳಿಂದ ಅನುಗ್ರಹ ಸಂದೇಶದ ಬಳಿಕ ಸಕಲರಿಗೂ ತೀರ್ಥ ಪ್ರಸಾದ ವಿತರಿಸಲಾಯಿತು.