ನೋಡಿ: ಕಣ್ಣಿಗೆ ಬಟ್ಟೆ ಕಟ್ಟಿ ಖಡ್ಗ ಝಳಪಿಸಿ ಕೌಶಲ ಪ್ರದರ್ಶಿಸಿದ ರಜಪೂತ ಮಹಿಳೆ - ರಾಜ್ಕೋಟ್ನಲ್ಲಿ ನಡೆದ ತಲ್ವಾರ್ ರಾಸ್ (Sword Raas) ಕಾರ್ಯಕ್ರಮ
ಗುಜರಾತ್: ರಾಜ್ಕೋಟ್ನಲ್ಲಿ ನಿನ್ನೆ ನಡೆದ 'ತಲ್ವಾರ್ ರಾಸ್' (Sword Raas) ಕಾರ್ಯಕ್ರಮದಲ್ಲಿ ರಜಪೂತ ಮಹಿಳೆಯರು ಕಣ್ಣಿಗೆ ಬಟ್ಟೆ ಕಟ್ಟಿ ಖಡ್ಗ ಕೌಶಲ್ಯವನ್ನು ಪ್ರದರ್ಶಿಸಿದರು. ಕಳೆದ ಐದು ದಿನಗಳಿಂದ ರಾಜ್‌ಕೋಟ್‌ನ ರಾಜಮನೆತನದವರು ಈ ಕಾರ್ಯಕ್ರಮ ಆಯೋಜಿಸಿದ್ದು, ತಲ್ವಾರ್ ರಾಸ್ ಸಮಾರಂಭದಲ್ಲಿ 200ಕ್ಕೂ ಅಧಿಕ ರಜಪೂತ ಮಹಿಳೆಯರು ಪಾಲ್ಗೊಂಡು ಸಾಂಪ್ರದಾಯಿಕ ಕಲೆ ಪ್ರದರ್ಶಿಸಿ ಹುಬ್ಬೇರಿಸಿದರು.