ಹಾವೇರಿಯಲ್ಲಿ ಸಿಎಎ, ಎನ್ಆರ್ಸಿ ವಿರೋಧಿಸಿ ಬೃಹತ್ ಪ್ರತಿಭಟನೆ - Haveri Protest
ಸಿಎಎ, ಎನ್ಆರ್ ಸಿ ಮತ್ತು ಎನ್ಪಿಆರ್ ರದ್ದತಿಗೆ ಆಗ್ರಹಿಸಿ ನಗದರಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಿತು. ಜಿಲ್ಲಾ ಕ್ರೀಡಾಂಗಣದಲ್ಲಿ ಸಂವಿಧಾನ ರಕ್ಷಣಾ ಸಮಿತಿ ಆಯೋಜಿಸಿದ್ದ ಸಮಾವೇಶದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ರು. ಇದಕ್ಕೂ ಮೊದಲು ನಗರದ ಮೈಲಾರ ಮಹಾದೇವಪ್ಪ ವೃತ್ತದಿಂದ ಸಂವಿಧಾನ ರಕ್ಷಣಾ ಸಮಿತಿ ಸದಸ್ಯರು ಮುನ್ಸಿಪಲ್ ಹೈಸ್ಕೂಲ್ ಮೈದಾನದವರೆಗೆ ಜಾಥ ನಡೆಸಿದ್ರು. ಈ ವೇಳೆ ಮಾತನಾಡಿದ ಡಿವೈಎಫ್ವೈ ರಾಜ್ಯಾಧ್ಯಕ್ಷ ಮುನೀರ್, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.