ರಾಜಕೀಯ ಗುರುಗಳ ಸಮಾಧಿಗೆ ನಮೋ ಭೇಟಿ, ಅಜಾತಶತ್ರುವಿಗೆ ಗೌರವ ನಮನ - ಪ್ರಧಾನಿ ನರೇಂದ್ರ ಮೋದಿ
2ನೇ ಅವಧಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಸಂಜೆ ಪ್ರಮಾಣವಚನ ಸ್ವೀಕಾರಿಸಲಿದ್ದು, ಅದಕ್ಕೂ ಮುನ್ನ ಬೆಳಗ್ಗೆ ಮಹಾತ್ಮಾ ಗಾಂಧಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಮಾಧಿ ಬಳಿ ತೆರಳಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ರಾಷ್ಟ್ರೀಯ ಯುದ್ಧ ಸ್ಮಾರಕ,ಅಮರ್ ಜವಾನ್ ಜ್ಯೋತಿ ಸ್ಥಳಕ್ಕೆ ಮೋದಿ ಭೇಟಿ ನೀಡಿ ನಮನ ಸಲ್ಲಿಸಿದರು.