ದಶಾಶ್ವಮೇಧಘಾಟ್‌ನಲ್ಲಿ ನಮೋ ಗಂಗಾರತಿ, ಅಗ್ನಿಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ ಮೋದಿ! - ವಾರಣಾಸಿ
ಗಂಗೆಯ ಬೀಡು, ದೇಗುಲ ನಗರಿ, ಸ್ವಕ್ಷೇತ್ರ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭರ್ಜರಿ ರೋಡ್ ಶೋ ನಡೆಸಿದರು. ಮತಬೇಟೆ ನಡೆಸಿದ ಬಳಿಕ ದಶಾಶ್ವಮೇಧದಲ್ಲಿ ನಮೋ ಗಂಗಾರತಿಯಲ್ಲಿ ಭಾಗಿಯಾದರು. ಈ ವೇಳೆ ಮೈ ಭೀ ಚೌಕಿದಾರ್ ಎಂದು ದೀಪಗಳಿಂದ ಬೆಳಗಿಸಲಾಗಿತ್ತು ಬೃಹತ್ ರೋಡ್ ಶೋ ನಂತರ ನಮೋ ಪ್ರಸಿದ್ಧ ದಶಾಶ್ವಮೇಧಘಾಟ್‌ನಲ್ಲಿ ಗಂಗಾ ಆರತಿ ನೆರವೇರಿಸಿದರು. ಕಳೆದ ಐದು ವರ್ಷದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿ ಗಂಗಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸ್ವತಃ ಮೋದಿ ಅವರು ಗಂಗಾ ಪೂಜೆ ಸಲ್ಲಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗಂಗಾರತಿ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.