ಶಿರಸಿಯಲ್ಲಿ ಈ ಬಳಗಕ್ಕೆ ಸಂಭ್ರಮ ಸಡಗರ... ಸಿಹಿ ಹಂಚಿ ಸಂಭ್ರಮೋತ್ಸವ - undefined
ಶಿರಸಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡದ ಶಿರಸಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಬಿಜೆಪಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ಶಿವಾಜಿ ಚೌಕ್ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕರಿಗೆ ಸಿಹಿ ಹಾಗೂ ಹಾಲು ವಿತರಿಸಲಾಯಿತು. ಶಿರಸಿಯ ಶಿವಾಜಿ ಚೌಕದಲ್ಲಿ ಪೆಂಡಾಲ್ ಹಾಕಿ ಸಿಹಿ ಸಿಹಿಯಾದ ಶಿರಾ ಹಾಗೂ ಬಾದಾಮಿ ಹಾಲು ನೀಡಿ ಖುಷಿ ಪಟ್ಟರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.