ನೋಡಿ: ಅಡಿಪಾಯವಿಲ್ಲದೆ ಮನೆ ನಿರ್ಮಿಸುವ ತಂತ್ರಜ್ಞಾನ ಪರಿಚಯಿಸಿದ ಮೈಸೂರಿನ ಆರ್ಕಿಟೆಕ್ಟ್ - New technology for home construction
ಮನೆ ಕಟ್ಬೇಕು ಅಂದ್ರೆ ಮೊದಲು ಗಟ್ಟಿಯಾಗಿ ಅಡಿಪಾಯ ಹಾಕ್ಬೇಕು. ಹೀಗೆ ಸುಭದ್ರವಾದ ಅಡಿಪಾಯ ಹಾಕೋಕೆ ಸಾಕಷ್ಟು ಖರ್ಚಂತೂ ಇದ್ದೇ ಇದೆ. ಒಂದು ಅಂದಾಜಿನ ಪ್ರಕಾರ, ಮನೆ ನಿರ್ಮಾಣದ ಒಟ್ಟು ಖರ್ಚಿನ ಶೇ 30ರಷ್ಟು ಬಂಡವಾಳ ಅಡಿಪಾಯಕ್ಕೇ ಬೇಕು. ಆದರೆ ಇದಕ್ಕೆ ಮೈಸೂರಿನ ಆರ್ಕಿಟೆಕ್ಟ್ ಶರತ್ ಕುಮಾರ್ ಪರಿಹಾರ ಕಂಡು ಹಿಡಿದಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ಹೊಸ ತಂತ್ರಜ್ಞಾನ ಬಳಸಿರುವ ಇವರು ಕಡಿಮೆ ಅವಧಿ ಮತ್ತು ಕಡಿಮೆ ವೆಚ್ಚದಲ್ಲಿ ಮನೆ ಕಟ್ಟಿ ತೋರಿಸಿದ್ದಾರೆ.