ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದ ಕೋತಿ ಮರಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಯುವಕರು - ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದ ಕೋತಿ ಮರಿ
ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿತಾಂಡದಲ್ಲಿ ವಿದ್ಯುತ್ ಸ್ಪರ್ಶದಿಂದ ಕೋತಿಯೊಂದು ಸಾವನ್ನಪ್ಪಿದ್ದು, ಮರಿಗೆ ಗಾಯವಾಗಿದೆ. ಇದನ್ನು ಗಮನಿಸಿದ ಊರಿನ ಯುವಕರು ಕೋತಿಯನ್ನು ಮಣ್ಣು ಮಾಡಿ, ಗಾಯಗೊಂಡಿದ್ದ ಕೋತಿ ಮರಿಯನ್ನು ವೈದ್ಯರಿಂದ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.