ಕೈ-ಕಮಲದ ಮಧ್ಯೆ ಮತ್ತೊಂದು ಮಿನಿ ಸಮರ... ಘಟಾನುಘಟಿಗಳ ದಂಡು ಕುಂದಗೋಳದತ್ತ! - ನಾಮಪತ್ರ ಸಲ್ಲಿಕೆ
ರಾಜ್ಯದ ಎರಡು ಕ್ಷೇತ್ರದಲ್ಲಿ ಈಗ ಮಿನಿ ಕದನವೇರ್ಪಟ್ಟಿದೆ. ಅದರಲ್ಲೂ ಕುಂದಗೋಳ ರಾಜ್ಯದ ಗಮನ ಸೆಳೆಯುತ್ತಿದೆ. ಸಚಿವ ಸಿ.ಎಸ್ ಶಿವಳ್ಳಿ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಮೇ 19ಕ್ಕೆ ಮತದಾನ ನಡೆಯಲಿದೆ. ಅದೇ ಕಾರಣಕ್ಕೆ ಈ ಕ್ಷೇತ್ರವನ್ನ ಕಾಂಗ್ರೆಸ್ ತನ್ನ ಕೈವಶಪಡಿಸಿಕೊಳ್ಳಲು ಪಣ ತೊಟ್ಟಿದೆ. ಆದರೆ, ಬಿಜೆಪಿ ಈ ಸಾರಿ ಕಮಲ ಅರಳಿಸೋದಕ್ಕಾಗಿ ಸರ್ಕಸ್ ಮಾಡ್ತಿದೆ.