ನೋಡಿ: ಗುಲಾಬಿ ಬಣ್ಣದ ತಾವರೆಗಳನ್ನು ಹೊದ್ದು ಮಲಗಿದ ಭತ್ತದ ಗದ್ದೆಗಳು
ಕೇರಳ: ತಾವರೆ ಹೂ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ನೀರಿನಲ್ಲೇ ಬೆಳೆಯುವ ಈ ಹೂವು ಉತ್ತಮ ಆರೋಗ್ಯಕ್ಕೂ ಬಲು ಉಪಕಾರಿ. ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ಕೊಟ್ಟಾಯಂನ ಮಲರಿಕಲ್ ಪ್ರದೇಶದ ಭತ್ತದ ಗದ್ದೆಗಳು ಗುಲಾಬಿ ಬಣ್ಣದ ತಾವರೆ ಹೂವಿಗಳಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಇಲ್ಲಿ ಬೋಟ್ ಸವಾರಿಗೆ ಕೂಡ ಅವಕಾಶ ನೀಡಲಾಗಿದೆ.