ಊಟವಿಲ್ಲ, ನೀರನ್ನೂ ಕೊಡ್ತಿಲ್ಲ... ಮಹಾರಾಷ್ಟಕ್ಕೆ ಗುಳೆ ಹೋಗಿರುವ ಕನ್ನಡಿಗರ ಕಣ್ಣೀರು - Maharashtra
ರಾಯಚೂರು: ಮಹಾರಾಷ್ಟ್ರದ ಪುಣೆ ಹೊರವಲಯದಲ್ಲಿ ರಸ್ತೆ, ಕಟ್ಟಡ ಕೆಲಸಕ್ಕಾಗಿ ಗುಳೆ ಹೋಗಿರುವ ಲಿಂಗಸುಗೂರು ತಾಲೂಕು ನಿಲೋಗಲ್ ಗ್ರಾಮದ 20 ಕ್ಕೂ ಹೆಚ್ಚು ಜನ ರಾಜ್ಯಕ್ಕೆ ಬರಲಾಗದೆ ಅಸಹಾಯಕ ಸ್ಥಿತಿಯಲ್ಲಿ ಪರದಾಡುತ್ತಿದ್ದಾರೆ. ಇವರಲ್ಲಿ ಗರ್ಭಿಣಿ ಸ್ತ್ರೀ ಸೇರಿದಂತೆ ಮಕ್ಕಳು, ವಯೋವೃದ್ಧರು ಇದ್ದು, ಒಂದೊತ್ತಿನ ಊಟ ಸಹ ಸಿಗದೇ ಕಂಗಾಲಾಗಿದ್ದಾರೆ. ತಮ್ಮನ್ನು ರಕ್ಷಿಸುವಂತೆ ರಾಜ್ಯ ಸರ್ಕಾರಕ್ಕೆ ವಿಡಿಯೋ ಮೂಲಕ ಮೊರೆಯಿಟ್ಟಿದ್ದಾರೆ ಈ ಬಡಪಾಯಿಗಳು.