ಕರ್ನಾಟಕ

karnataka

ETV Bharat / videos

ಕೊರೊನಾ ಅಟ್ಟಹಾಸ: ಜರ್ಮನಿಯಲ್ಲಿರುವ ಕನ್ನಡಿಗ ಪ್ರಸನ್ನ ಅವರ ಕಿರು ಸಂದರ್ಶನ - ಜರ್ಮನಿ

By

Published : May 15, 2020, 8:25 PM IST

ಜಗತ್ತಿನಾದ್ಯಂತ ಕೊರೊನಾ ರಣಕೇಕೆ ಹಾಕ್ತಿದೆ. ಕೆಲ ದೇಶಗಳನ್ನು ಹೊರತುಪಡಿಸಿದ್ರೆ ಭಾಗಶಃ ರಾಷ್ಟ್ರಗಳು ಕೊರೊನಾ ದಾಳಿಗೆ ತುತ್ತಾಗಿದೆ. ಇನ್ನು ಜರ್ಮನ್​ ದೇಶವನ್ನು ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಅತೀ ಹೆಚ್ಚು ವೆಂಟಿಲೇಟರ್ ವ್ಯವಸ್ಥೆ, ಉತ್ತಮ ನಿರ್ವಹಣೆ ಹೊಂದಿರುವ ದೇಶ. ಅಷ್ಟೇ ಅಲ್ಲದೆ, ಅಮೆರಿಕಾ, ಚೀನಾ, ಇಟಲಿಗೆ ಹೋಲಿಕೆ ಮಾಡಿದ್ರೆ ಜರ್ಮನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ. ಇಲ್ಲಿ ಈವರೆಗೆ 1,75,000 ಮಂದಿಗೆ ಕೊರೊನಾ ತಗುಲಿದ್ದು, ಅದರಲ್ಲಿ 1,50,000 ಮಂದಿ ಗುಣಮುಖರಾಗಿದ್ದಾರೆ. ಈ ಬಗ್ಗೆ ದಕ್ಷಿಣ ಜರ್ಮನಿಯಲ್ಲಿ ಇಂಜಿನಿಯರ್​ ಆಗಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕದ ಹಾಸನ ಮೂಲದವರಾದ ಪ್ರಸನ್ನ ಅವರು ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ABOUT THE AUTHOR

...view details