ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇನೆ... ಜಿಎಂ ಸಿದ್ದೇಶ್ವರ್ ವಿಶ್ವಾಸ - ಲೋಕಸಭಾ ಚುನಾವಣೆ
ದಾವಣಗೆರೆ: ನಾನು ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದೇನೆ. ನಾಲ್ಕನೇ ಬಾರಿಯೂ ಇದು ಮತ್ತೆ ಮರುಕಳಿಸಲಿದೆ. ನರೇಂದ್ರ ಮೋದಿ ಸರ್ಕಾರದ ಆಡಳಿತ ವೈಖರಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಶ್ರಮದಿಂದ ನಾನು ಮತ್ತೆ ಸಂಸದನಾಗಲಿದ್ದೇನೆ ಎಂದಿದ್ದಾರೆ. ಆದರೆ ಚುನಾವಣೆಯಲ್ಲಿ ಗೆಲುವು ಪಡೆಯು ನಾನೇನೂ ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ದಾವಣಗೆರೆ ತಾಲೂಕಿನ ತೋಳಹುಣಸೆಯ ದಾವಣಗೆರೆ ವಿವಿಯಲ್ಲಿ ನಡೆಯುತ್ತಿರುವ ಮತ ಎಣಿಕೆಯ ಮಾಧ್ಯಮ ಕೇಂದ್ರದ ಬಳಿ ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದರು.