ಸಾಗರದಲ್ಲಿ ಮುಂಗಾರು ಮಳೆಯ ದರ್ಶನ,ನಿರಂತರ ವರ್ಷಧಾರೆಗೆ ಜನರ ಪ್ರಾರ್ಥನೆ - undefined
ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣಕ್ಕೆ ವರುಣನ ಆಗಮನವಾಗಿದ್ದು,ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿದ್ದ ಜನರಿಗೆ ಮಳೆರಾಯ ತಂಪೆರದಿದ್ದು, ಜನರಲ್ಲಿ ಸಂತಸ ಮೂಡಿದೆ. ಇಲ್ಲಿ ಜೂನ್ನಿಂದಲೇ ಮಳೆ ಪ್ರಾರಂಭವಾಗುತ್ತಿತ್ತು. ಮಳೆಯಿಲ್ಲದೆ ಕೆರೆ ಕಟ್ಟೆಗಳು ಬತ್ತಿ ಹೋಗಿದ್ದು, ನೀರಿಲ್ಲದೆ ಜಾನುವಾರುಗಳು ಪರದಾಡುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲಿ ಮಳೆ ಬಂದಿದ್ದು, ಕೊಂಚ ಜೀವ ಬಂದಂತಾಗಿದೆ. ಮಳೆ ಇದೇ ರೀತಿ ಬಂದು ಕೆರೆ ಕಟ್ಟೆಗಳು ತುಂಬಲಿ ಎಂದು ಜನ ದೇವರಲ್ಲಿ ಪ್ರಾರ್ಥಿಸಿದ್ದಾರೆ.