ಚಿತ್ತಾಪುರದಲ್ಲಿ ಚಿರತೆ ಭಯ; ನಕಲಿ ವಿಡಿಯೋ ನೋಡಿ ನೆಮ್ಮದಿ ಕಳೆದುಕೊಂಡ ಗ್ರಾಮಸ್ಥರು - 'Leopard' video goes viral in social media at the place of kalburgi
ಚಿರತೆ ಹಾಗೂ ಸಿಂಹ ಓಡಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಣಿಕೇರಾ ತಾಂಡದಲ್ಲಿ ನಡೆದಿದೆ. ಇದರಿಂದ ಗ್ರಾಮಸ್ಥರು ಮನೆಯಿಂದ ಹೊರಬಾರದಂತಹ ವಾತಾವರಣ ಸೃಷ್ಠಿಯಾಗಿದೆ. ಈ ಕುರಿತು 'ಈಟಿವಿ ಭಾರತ್' ನೊಂದಿಗೆ ಮಾತನಾಡಿದ ಚಿತ್ತಾಪುರ ಅರಣ್ಯ ಅಧಿಕಾರಿ ವಿಜಯಕುಮಾರ್ ಇದೊಂದು ವದಂತಿ, ಯಾರೋ ಕಿಡಿಗೇಡಿಗಳು ಮಾಡಿದ ಹುಚ್ಚಾಟಕ್ಕೆ ಗ್ರಾಮಸ್ಥರು, ರೈತರು ಆತಂಕ ಪಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ದಾರೆ.