ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡ ಆನೆಮರಿ... ಕೃಷಿ ತೋಟದಲ್ಲೇ ಉಳಿದ ಮರಿಯಾನೆ! - ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡ ಮರಿಯಾನೆ
ಬೆಳ್ತಂಗಡಿ: ಕಾಡಿನಿಂದ ಬಂದ ಆನೆ ಹಿಂಡು ಕೃಷಿತೋಟಕ್ಕೆ ನುಗ್ಗಿದ್ದು, ಈ ವೇಳೆ ಮರಿಯಾನೆವೊಂದು ಅಲ್ಲೇ ಉಳಿದುಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಕಡಿರುದ್ಯಾವರದಲ್ಲಿ ನಡೆದಿದೆ. ಅಕ್ಟೋಬರ್ .29ರ ರಾತ್ರಿ ಡೀಕಯ್ಯ ಗೌಡರವರ ತೋಟಕ್ಕೆ ನುಗ್ಗಿರುವ ಆನೆಗಳ ಹಿಂಡು ಕೃಷಿ ತೋಟ ಹಾಳು ಮಾಡಿದ್ದು, ಈ ವೇಳೆ ಅಲ್ಲಿದ್ದ ಹೋಗುವ ವೇಳೆ ಮರಿಯಾನೆ ದಾರಿ ತಪ್ಪಿಸಿಕೊಂಡಿದೆ. ಬೆಳಗ್ಗೆ ತೋಟದ ಮಾಲಕರು ಅಲ್ಲಿಗೆ ಬಂದಾಗ ಮಾಹಿತಿ ಗೊತ್ತಾಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸದ್ಯ ಮರಿಯಾನೆ ನೋಡಲು ಜನರು ಸೇರುತ್ತಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಿದ್ದಾರೆ.