ಪಿಯುಸಿ ಫಲಿತಾಂಶದ ಬೆನ್ನಲ್ಲೇ ಶೈಕ್ಷಣಿಕ ವರ್ಷದ ರೂಪುರೇಷೆ ಬಿಡುಗಡೆಗೆ ಆಗ್ರಹ
ತುಮಕೂರು : ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಪ್ರಸ್ತುತ ವರ್ಷದ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆ ಬರೆಯಲಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪಾಠ-ಪ್ರವಚನಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಆರಂಭಿಸಿವೆ. ಕೊರೊನಾದಿಂದಾಗಿ ಶೈಕ್ಷಣಿಕ ತರಗತಿಗಳು ಯಾವಾಗ ಆರಂಭವಾಗಬೇಕು ಎಂಬುದನ್ನು ಸರ್ಕಾರ ಸ್ಪಷ್ಟಡಿಸಿಲ್ಲ. ಅಲ್ಲದೆ ಆನ್ಲೈನ್ ತರಗತಿ ಬಗ್ಗೆಯೂ ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ ಗೊಂದಲ ಉಂಟಾಗಿದೆ. ಖಾಸಗಿ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮುಂದಿನ ತಯಾರಿಯಲ್ಲಿ ತೊಡಗಿವೆ. ಆದರೆ, ಸರ್ಕಾರ ಈವರೆಗೂ ಸ್ಪಷ್ಟವಾದ ರೂಪುರೇಷೆ ಬಿಡುಗಡೆ ಮಾಡದಿರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ ಎಂದು ವಿದ್ಯಾನಿಧಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್ ಬಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
Last Updated : Jul 15, 2020, 10:46 PM IST