ಆರಕ್ಷಕ ಅಷ್ಟೇ ಅಲ್ಲ, ಪರಿಸರ ರಕ್ಷಕ... ಐಪಿಎಸ್ ಅಧಿಕಾರಿ ಮನೆ ಮುಂದೆ ಹಸಿರು ಬೃಂದಾವನ
ಬೆಂಗಳೂರು: ಇಂದು ವಿಶ್ವ ಪರಿಸರ ದಿನಾಚರಣೆ. ಪರಿಸರ ಪ್ರೇಮಿಗಳು ಸಸಿ ನೆಟ್ಟು ಮತ್ತಷ್ಟು ಪರಿಸರ ಉಳಿಸುವುದಕ್ಕೆ ಮುಂದಾಗಿದ್ದಾರೆ. ಅಂತೆಯೇ ಒತ್ತಡದ ಜೀವನದ ಜೊತೆಗೆ ಐಪಿಎಸ್ ಅಧಿಕಾರಿ ಶಶಿಕುಮಾರ್ ತಮ್ಮ ಮನೆ ಅಂಗಳದಲ್ಲಿ ತರಕಾರಿ ಗಿಡಗಳು, ಸಸಿಗಳನ್ನು ನೆಟ್ಟು ಮಾದರಿ ಎನಿಸಿದ್ದಾರೆ. ಈಟಿವಿ ಭಾರತ ಜೊತೆಗೆ ಅವರು ಮಾತನಾಡಿದ್ದು, ಕೈದೋಟದ ಕುರಿತು ಮಾಹಿತಿ ನೀಡಿದ್ದಾರೆ.