ನ್ಯಾಯ, ಭಾವೈಕ್ಯತೆ ಎರಡನ್ನೂ ಸುಪ್ರೀಂ ಎತ್ತಿ ಹಿಡಿದಿದೆ: ಸಿ.ಟಿ. ರವಿ - Ayodhya verdict news
ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯ ಹಾಗೂ ಭಾವೈಕ್ಯತೆ ಎರಡನ್ನೂ ಎತ್ತಿಹಿಡಿದು ತೀರ್ಪು ನೀಡಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ. ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸುಪ್ರೀಂ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಭಾರತ ಭಾವೈಕ್ಯತೆಯ ನೆಲೆಯಾಗಿದ್ದು, ಐತಿಹಾಸಿಕವಾದ ಈ ತೀರ್ಪಿಗೆ ಎಲ್ಲರೂ ಬೆಲೆ ಕೊಟ್ಟು ಸುಖವಾಗಿ ಬದುಕುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.