ಹೆಂಡ್ತಿ ಅಕ್ಕನ ಕಳ್ಕೊಂಡಿದೀನಿ.. ಹೆಂಡ್ತಿ ತಮ್ಮನನ್ನೂ ಕಳ್ಕೊಂಡಿದೀನಿ.. ವೆಂಟಿಲೇಟರ್ ಸಿಗದೇ ಶಾಸಕ ಹಾಲಪ್ಪ ಕೋಪ.. - Bjp Mla Halappa Question on Ventilator in assembly
ಸ್ವಾಮಿ ಬೆಳಗ್ಗೆಯಿಂದ 3 ಗಂಟೆ ಕಾಯ್ದಿದೀನಿ.. ಸಾಗರದಿಂದ ಬಂದ ಮಾಜಿ ಗ್ರಾಪಂ ಅಧ್ಯಕ್ಷನಾಗಿದ್ದ ರೋಗಿಯೊಬ್ಬನಿಗೆ ವೆಂಟಿಲೇಟರ್ ಬೆಡ್ ಕೊಡಿಸೋಕೆ ನನ್ನ ಕೈಯಿಂದ ಆಗ್ತಿಲ್ಲ. ನನಗೆ ಮಾತಾಡೋಕೆ ಬರೀ ಒಂದ್ ನಿಮಿಷ ಕೊಡಿ ಸಾಕು. ನಾನೇನ್ ಸರ್ಕಾರದ ವಿರುದ್ಧ ಮಾತಾಡಿದ್ನಾ ಇಲ್ಲ ಪಕ್ಷದ ವಿರೋಧ ಮಾತಾಡಿದ್ನಾ.. ವಿಧಾನಸಭೆಯೊಳಗೆ ವೆಂಟಿಲೇಟರ್ ಸಿಗದ ಕಾರಣ ಬಿಜೆಪಿ ಶಾಸಕ ಹರತಾಳು ಹಾಲಪ್ಪ ವ್ಯಘ್ರವಾಗಿದ್ದ ಬಗೆ ಇದು..