ಮಂಗಳೂರು: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಬೈಕ್ ಸವಾರ - ವಿಡಿಯೋ - ಉಳ್ಳಾಲದಲ್ಲಿ ಕೂದಲೆಳೆ ಅಂತರದಲ್ಲಿ ಬದುಕುಳಿದ ಬೈಕ್ ಸವಾರ
ದಕ್ಷಣ ಕನ್ನಡ ಜಿಲ್ಲೆಯ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಎಲಿಯಾರುಪದವು ಎಂಬಲ್ಲಿ, ಅತಿವೇಗದಿಂದ ಬಂದ ಸ್ಕೂಟರ್ ಸವಾರನೋರ್ವ ತಿರುಗುತ್ತಿದ್ದ ಬಸ್ಸನ್ನು, ತಪ್ಪಿಸುವ ಧಾವಂತದಲ್ಲಿ ರಸ್ತೆ ಬದಿಯ ಅಂಗಡಿ ಮತ್ತು ಮರವೊಂದರ ನಡುವೆ ವೇಗದಲ್ಲಿ ಸ್ಕೂಟರ್ ಚಲಾಯಿಸಿದ್ದಾನೆ. ಈ ಸ್ಕೂಟರ್ ಸವಾರ ಮೊದಲು ಬಸ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಂಡು, ನಂತರ ಚಾಕಚಕ್ಯತೆಯಿಂದ ಮರಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯ ಸಕತ್ ವೈರಲ್ ಆಗಿದೆ.
Last Updated : Jan 10, 2022, 5:10 PM IST