ಬಂಡೀಪುರದಲ್ಲಿ ವರ್ಷಧಾರೆ.. ಕ್ಯಾಮರಾ ಕಣ್ಣಲ್ಲಿ ಸೆರೆಯಾದ ವನ್ಯಜೀವಿಗಳ ಹರ್ಷೋಲ್ಲಾಸ - Rain, bandipura, forest,
ಚಾಮರಾಜನಗರ: ಗುಂಡ್ಲುಪೇಟೆ ಭಾಗದ ಹಲವೆಡೆ ಮತ್ತು ಬಂಡೀಪುರ ಅಭಯಾರಣ್ಯದಲ್ಲಿ ಅರ್ಧ ತಾಸಿಗೂ ಹೆಚ್ಚು ಕಾಲ ಭರ್ಜರಿ ಮಳೆಯಾಗಿದೆ. ಚಿಗುರೊಡೆಯುತ್ತಿರುವ ಹಸಿರು ಕಾನನದಲ್ಲಿ ವರುಣ ದೇವನ ಕೃಪೆಗೆ ವನ್ಯಜೀವಿಗಳು ನವೋಲ್ಲಾಸ ತೋರ್ಪಡಿಸಿದವು. ಜಿಂಕೆ, ಆನೆಗಳು ಮಳೆಯಲ್ಲಿ ನೆನೆಯುತ್ತಾ ಪ್ರವಾಸಿಗರನ್ನು ಮತ್ತಷ್ಟು ಮುದಗೊಳಿಸಿದವು. ಇನ್ನು, ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ, ಬಾಚಹಳ್ಳಿ, ಮಂಗಳ, ಹನೂರು ತಾಲೂಕಿನ ಹಲವೆಡೆ ಸಾಧಾರಣ ಮಳೆಯಾಗಿದೆ. ಅಗ್ನಿಕುಂಡದಂತಾಗಿದ್ದ ಹನೂರು ಭಾಗಕ್ಕೆ ಮಳೆಯ ಸಿಂಚನ ತುಸು ಧಗೆ ಕಡಿಮೆ ಮಾಡಿದ್ದರೆ, ರೈತರ ಮೊಗದಲ್ಲಿ ಆಶಾಭಾವ ಮೂಡಿದೆ.
TAGGED:
Rain, bandipura, forest,