ಕರ್ನಾಟಕ

karnataka

ETV Bharat / videos

ಯುವತಿ ಜೀವ ರಕ್ಷಿಸಲು ರೈಲ್ವೇ ಹಳಿ ಮೇಲೆ ಹಾರಿದ ಯುವಕ... ಇಬ್ಬರ ಮೇಲೆ ರೈಲು ಹಾದ್ರೂ, ಉಳಿತು ಪ್ರಾಣ! - ಯುವತಿಯ ಪ್ರಾಣ ರಕ್ಷಣೆ ಮಾಡಿದ ವ್ಯಕ್ತಿ

By

Published : Feb 12, 2022, 4:10 AM IST

Updated : Feb 3, 2023, 8:11 PM IST

ಭೋಪಾಲ್​(ಮಧ್ಯಪ್ರದೇಶ): ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ರೈಲು ಬರುತ್ತಿದ್ದ ವೇಳೆ ಯುವತಿಯೋರ್ವಳು ರೈಲ್ವೆ ಟ್ರ್ಯಾಕ್ ಮೇಲೆ ಹಾರಿದ್ದು, ಆಕೆಯ ಪ್ರಾಣ ರಕ್ಷಣೆ ಮಾಡುವಲ್ಲಿ ಯುವಕನೋರ್ವ ಯಶಸ್ವಿಯಾಗಿದ್ದಾನೆ. ಭೋಪಾಲ್​​ನ ಬರ್ಗೇಡಿ ಗೇಟ್​ ಬಳಿಯ ರೈಲ್ವೆ ಹಳಿಯಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಯುವತಿಯೋರ್ವಳು ಗೂಡ್ಸ್​ ರೈಲಿನ ಮುಂದೆ ಹಾರಿದ್ದಾಳೆ. ಇದರ ಬೆನ್ನಲ್ಲೇ ಆಕೆಯ ಪ್ರಾಣ ರಕ್ಷಣೆ ಮಾಡಲು ಮೆಹಬೂಬ್​ ಎಂಬ ಯುವಕ ರೈಲ್ವೆ ಟ್ರ್ಯಾಕ್​ ಮೇಲೆ ಹಾರಿದ್ದು, ಆಕೆಯ ಪ್ರಾಣ ರಕ್ಷಣೆ ಮಾಡಿದ್ದಾನೆ. ಇಬ್ಬರು ರೈಲ್ವೆ ಟ್ರ್ಯಾಕ್​ನಲ್ಲಿದ್ದ ಕಾರಣ ಅವರ ಮೇಲೆ ರೈಲು ಹಾದು ಹೋಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.
Last Updated : Feb 3, 2023, 8:11 PM IST

ABOUT THE AUTHOR

...view details