ಅತ್ತೆ ಮನೆಗೆ ಹೋಗಿ ಬರುತ್ತಿದ್ದ ವೇಳೆ ಎಸ್ಐ ಮೇಲೆ ಯುವಕರಿಂದ ದಾಳಿ! ವಿಡಿಯೋ - ವಿಜಯನಗರಂ ಅಪರಾಧ ಸುದ್ದಿ
ಅತ್ತೆ ಮನೆಗೆ ಹೋಗಿ ಬರುತ್ತಿದ್ದ ವೇಳೆ ಎಸ್ಐ ಮೇಲೆ ಇಬ್ಬರು ಯುವಕರು ದಾಳಿ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯನಗರಂನ ಶಿವನ್ನ ಪೇಟ್ದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಖಡ್ಗವಲಸ ಬಳಿ ಚಂದ್ರಶೇಖರ್ ಮತ್ತು ಸುಧಾಕರ್ ಯುವಕರಿಬ್ಬರು ಬೈಕ್ನಲ್ಲಿ ವೇಗವಾಗಿ ಚಲಿಸುತ್ತಿದ್ದರು. ಇದನ್ನು ನೋಡಿದ ಎಸ್ಐ ಯುವಕರಿಬ್ಬರಿಗೆ ಬುದ್ಧಿ ಮಾತು ಹೇಳಿದ್ದಾರೆ. ಆದ್ರೆ ಯುವಕರು ಎಸ್ಐ ವಿರುದ್ಧ ವಾಗ್ವಾದಕ್ಕೆ ಇಳಿದು ಹಲ್ಲೆ ನಡೆಸಿದ್ದಾರೆ. ಎಸ್ಐ ಮೇಲೆ ಹಲ್ಲೆ ನಡೆಯುತ್ತಿದ್ದರೂ ಜನ ವಿಡಿಯೋ ಮಾಡುತ್ತಿರುವುದು ಅಲ್ಲಿನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಮೇಲೆ ಹಳೆಯ ಅಪರಾಧ ಚಟುವಟಿಕೆಗಳು ಇದ್ದಲ್ಲಿ ರೌಡಿಶೀಟರ್ ಪಟ್ಟಿಗೆ ಸೇರಿಸಲಾಗುವುದು ಎಂದು ಇಲ್ಲಿನ ಪಾರ್ವತಿಪುರಂ ಸಿಐ ಲಕ್ಷಣ್ರಾವ್ ತಿಳಿಸಿದ್ದಾರೆ.