ಫೇಸ್ಬುಕ್ ಲೈವ್ ಮಾಡಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ: ವಿಡಿಯೋ ವೈರಲ್! - ಫೇಸ್ಬುಕ್ ಲೈವ್ ಮಾಡಿ ವಿದ್ಯಾರ್ಥಿ ಆತ್ಮಹತ್ಯೆ ವಿಡಿಯೋ ವೈರಲ್!
ಕರೂರ್(ತಮಿಳುನಾಡು): ಫೇಸ್ಬುಕ್ನಲ್ಲಿ ಲೈವ್ ವಿಡಿಯೋ ಹರಿಬಿಟ್ಟು ಯುವಕನೋರ್ವ ಜ್ಯೂಸ್ನಲ್ಲಿ ಕ್ರಿಮಿನಾಶಕ ಬೆರೆಸಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಜಿಲ್ಲೆಯ ಸನರ್ಪಟ್ಟಿಯಲ್ಲಿ ನಡೆದಿದೆ. 22 ವರ್ಷದ ಸದಾನಂದಮ್ ಆತ್ಮಹತ್ಯೆಗೆ ಯತ್ನಿಸಿ ಸದ್ಯ ಸ್ನೇಹಿತರ ರಕ್ಷಣೆಯಿಂದ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತ ಶಾಲೆ ಬಿಟ್ಟು ಪೈಂಟಿಂಗ್ ಕೆಲಸ ಮಾಡುತ್ತಿದ್ದ. ಅಲ್ಲದೆ ಮರಳು ಮಾರಾಟದಲ್ಲಿ ತೊಡಗಿದ್ದ. ಹೀಗಾಗಿ ಈತನನ್ನು ಬಸುಮತಿಪಾಲಯಂ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಇದರಿಂದ ನೊಂದ ಯುವಕ ಫೇಸ್ಬುಕ್ ಲೈವ್ ಮಾಡಿ ಆತ್ಮಹತ್ಯೆ ಯತ್ನ ಮಾಡಿದ್ದಾನೆ. ಈ ಬಗ್ಗೆ ಬಸುಮತಿಪಾಲಯಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.