ರಕ್ಷಾ ಕವಚ ಧರಿಸದೇ 22ನೇ ಮಹಡಿಯಲ್ಲಿ ಕಾರ್ಮಿಕನ ಸಾಹಸ...ಮುಂದೇನಾಯ್ತು ನೀವೇ ನೋಡಿ! - ಕಾರ್ಮಿಕ
ನೋಯ್ಡಾ: ಕಾರ್ಮಿಕನೊಬ್ಬ ಯಾವುದೇ ಜೀವರಕ್ಷ ಕವಚವಿಲ್ಲದೇ 22 ಅಡಿ ಎತ್ತರದ ಮಹಡಿಯಲ್ಲಿ ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ವೆಸ್ಟ್ ಭಾಗದಲ್ಲಿ ಈ ರೀತಿಯ ದುಸ್ಸಹಾಸಕ್ಕೆ ಕೈ ಹಾಕಿರುವ ಘಟನೆಯೊಂದು ನಡೆದಿದೆ. ನೆಲದಿಂದ 120 ಮೀಟರ್ ಎತ್ತರದಲ್ಲಿರುವ 22ನೇ ಮಹಡಿಯಲ್ಲಿ, ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕನ ಮೇಲೆ ಸಾರ್ವಜನಿಕರು ಬೇಸರವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲೂ ಕೂಡಾ ಸದ್ದು ಮಾಡುತ್ತಿದೆ.
Last Updated : Feb 25, 2020, 10:53 PM IST