ಮತ ಹಾಕದಿದ್ದಕ್ಕೆ ಸ್ಥಳೀಯರನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆದ ಕಾರ್ಯಕರ್ತರು: ವಿಡಿಯೋ - Youth League workers barge into houses, attack people for not voting in Kasaragod, Kerala
ಕಾಸರಗೋಡು: ಐಯುಎಂಎಲ್ನ ಕಾರ್ಯಕರ್ತರು ಇಲ್ಲಿನ ನಿವಾಸಿಗಳ ಮನೆಗಳಿಗೆ ದಾಳಿ ಇಟ್ಟು ಮಹಿಳೆಯರು, ಮಕ್ಕಳೆನ್ನದೆ ಹಲ್ಲೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಸರಗೋಡಿನ ಕನ್ಹಂಗಾಡ್ ಪುರಸಭೆಯ 36ನೇ ವಾರ್ಡ್ ಕಲ್ಲೂರವಿಯಲ್ಲಿ ಲೀಗ್ ಅಭ್ಯರ್ಥಿಗೆ ಮತ ಹಾಕದ ಹಿನ್ನೆಲೆ ಈ ದಾಳಿ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಘಟನೆಯ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.