ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ಗೆ ಕಪ್ಪು ಧ್ವಜ ತೋರಿಸಿದ ಯುವ ಕಾಂಗ್ರೆಸ್.. - Odisha Youth Congress
ಭುವನೇಶ್ವರ (ಒಡಿಶಾ): ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಒಡಿಶಾದ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಭುವನೇಶ್ವರದ ಚಂದ್ರಶೇಖರ್‌ಪುರದಲ್ಲಿ ಬರುತ್ತಿದ್ದ ಸಚಿವರ ಕಾರಿನ ಮುಂದೆ ಕಪ್ಪು ಧ್ವಜ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.