ರಸ್ತೆಗೆ ಬಿದ್ದ ಬಳಿಕ ಬೈಕ್‌ಗೆ ಹತ್ತಿಕೊಂಡ ಬೆಂಕಿ: ಸವಾರ ಸಜೀವ ದಹನ - ಜೀವಂತ ಹೊತ್ತಿ ಉರಿದ ಬೈಕ್ ಸವಾರ
ಹಾಪುರ(ಉತ್ತರ ಪ್ರದೇಶ): ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದ ಪರಿಣಾಮ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಸವಾರ ಜೀವಂತವಾಗಿ ಹೊತ್ತಿ ಉರಿದಿದ್ದಾನೆ. ಉತ್ತರಪ್ರದೇಶದ ಹಾಪುರನ ಜೆಎಂಎಸ್ ಕಾಲೇಜು ಬಳಿಯ ಹಫೀಜ್ಪುರ್ ಪೊಲೀಸ್ ಠಾಣಾ ಪ್ರದೇಶದ ಬೈಪಾಸ್ ರಸ್ತೆ ಬಳಿ ಘಟನೆ ನಡೆದಿದೆ. ಘಟನೆ ನಡೆದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ರೂ, ಅವರು ಸ್ಥಳಕ್ಕೆ ಬರಲು ತಡವಾದ ಕಾರಣ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದ ಎಂದು ಸ್ಥಳೀಯರು ತಿಳಿಸಿದರು.