ಬೈಕ್ ಮೇಲೆ ಆಸ್ಪತ್ರೆಗೆ ಸಾಗಿಸಿದ್ರೂ ಬದುಕಲಿಲ್ಲ ಯುವಕ... ಮನಕಲಕುವ ವಿಡಿಯೋ ವೈರಲ್! - ಭದ್ರಾದಿ ಕೋಥಗುಡೆಮ್ ಬೈಕ್ ಮೇಲೆ ಯುವಕನನ್ನು ಸಾಗಿಸುತ್ತಿರುವ ಸುದ್ದಿ
ಪೊಲೀಸರು ಪ್ರಕರಣ ದಾಖಲಿಸುತ್ತಾರೆ ಎಂಬ ಭಯದಿಂದ ಆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಭದ್ರಾದಿ ಕೋಥಗುಡೆಮ್ ಜಿಲ್ಲೆಯ ಅಶ್ವಾರಾವ್ಪೇಟ್ ತಾಲೂಕಿನಲ್ಲಿ ಎರಡು ದಿನಗಳ ಹಿಂದೆ ಕೆಲ ಕಿಡಿಗೇಡಿಗಳು ಎಟಿಎಂ ಧ್ವಂಸ ಮಾಡಿದ್ದರು. ಈ ಪ್ರಕರಣಕ್ಕೆ ಕಲ್ಯಾಣ್ ಸಾಕ್ಷಿಯಾಗಿದ್ದ. ಆದ್ರೆ, ಪೊಲೀಸರು ಕಲ್ಯಾಣ್ನನ್ನು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಕಲ್ಯಾಣ್ಗೆ ಪೊಲೀಸರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಕಲ್ಯಾಣ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ನೋಡಿದ ಸಂಬಂಧಿಗಳು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬಾರದ ಹಿನ್ನೆಲೆ ಬೈಕ್ ಮೇಲೆ ಕಲ್ಯಾಣ್ನನ್ನು ಕರೆದೊಯ್ಯಲಾಗಿತ್ತು. ಆದರೆ ಕಲ್ಯಾಣ್ ಬದುಕುಳಿಯಲಿಲ್ಲ. ಇನ್ನು ಕಲ್ಯಾಣ್ನನ್ನು ಬೈಕ್ ಮೇಲೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಮನಕಲಕುವಂತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.