ಕರ್ನಾಟಕ

karnataka

ETV Bharat / videos

ವೋಟರ್​ ಲಿಸ್ಟ್​ನಲ್ಲಿ ತಾಯಿ ಹೆಸರಿಲ್ಲವೆಂದು ಮೊಬೈಲ್ ಟವರ್​ ಏರಿದ ಮಗ.. ವಿಡಿಯೋ! - ಉತ್ತರ ಪ್ರದೇಶ ಪಂಚಾಯ್ತಿ ಚುನಾವಣೆ

By

Published : Apr 8, 2021, 5:16 PM IST

ಮೈನ್ಪುರಿ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಪಂಚಾಯಿತಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ತಯಾರಿ ಜೋರಾಗಿ ನಡೆದಿದ್ದು, ಇದರ ಮಧ್ಯೆ ವೋಟರ್​ ಲಿಸ್ಟ್​​ನಲ್ಲಿ ತಾಯಿ ಹೆಸರಿಲ್ಲವೆಂದು ಮಗನೊಬ್ಬ ಮೊಬೈಲ್​​ ಟವರ್​ ಏರಿದ್ದಾನೆ. ಮಾಹಿತಿ ಪಡೆದುಕೊಳ್ಳುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಯುವಕನ ಮನವೊಲಿಕೆ ಮಾಡಿ ಕೆಳಗೆ ಇಳಿಸಿದ್ದಾರೆ. ಆದರ್ಶ್​ ಕುಮಾರ್​ ಎಂಬ ಯುವಕ ಮೊಬೈಲ್ ಟವರ್​ ಏರಿದ್ದು, ತಾಯಿ ಶಾಂತಿ ದೇವಿ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ್ದಕ್ಕಾಗಿ ಈ ಕ್ರಮ ಕೈಗೊಂಡಿದ್ದಾಗಿ ಹೇಳಿದ್ದಾನೆ. ಪದೇ ಪದೆ ಇದರ ಬಗ್ಗೆ ದೂರು ನೀಡಿದ ನಂತರ ಕೂಡ ಯಾವುದೇ ಕ್ರಮ ಕೈಗೊಳ್ಳದ ಕಾರಣಕ್ಕಾಗಿ ಈ ರೀತಿಯಾಗಿ ನಡೆದುಕೊಂಡಿದ್ದಾನೆ. ಶಾಂತಿ ಉಲ್ಲಂಘನೆ ಮಾಡಿದ್ದಕ್ಕಾಗಿ ಆದರ್ಶ್ ಕುಮಾರ್​ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಜಾಮೀನಿನ ಮೇಲೆ ರಿಲೀಸ್ ಮಾಡಿದ್ದಾರೆ.

ABOUT THE AUTHOR

...view details