2 ಲಕ್ಷಕ್ಕೂ ಅಧಿಕ ಸೂರ್ಯ ನಮಸ್ಕಾರ ಹಾಕಿ ವಿಶ್ವ ದಾಖಲೆ ಬರೆದ ಯುವಕ! - World record,
ಉತ್ತರಪ್ರದೇಶದ ಲಖನೌನಲ್ಲಿ ಡಿಸೆಂಬರ್ 15-16 ರಂದು ನಡೆದ ವರ್ಲ್ಡ್ ಕಪ್ ಚಾಂಪಿಯನ್ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಫರಿದ್ಪುರ್ನ ಸಂದೀಪ್ ಆರ್ಯ್ 36 ಗಂಟೆ 21 ನಿಮಿಷ ಸೂರ್ಯ ನಮಸ್ಕಾರ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉತ್ತರಪ್ರದೇಶದ ರಾಜ್ಯಪಾಲ ಆನಂದಿ ಬೆನ್ ಪಟೇಲ್ ನೆರವೇರಿಸಿದ್ದರು. ಕೇಂದ್ರ ಸಚಿವ ರಾಜನಾಥ್ ಸಿಂಗ್ ಈ ವೇೆಳೆ ಉಪಸ್ಥಿತರಿದ್ದರು. ಈ ಹಿಂದೆ ಸಂದೀಪ್ 17 ಗಂಟೆ 30 ನಿಮಿಷ ಸೂರ್ಯ ನಮಸ್ಕಾರ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದರು. ಈಗ ಈ ದಾಖಲೆಯನ್ನು ಅಳಿಸಿಹಾಕಿ ಮತ್ತೊಮ್ಮೆ ಬರೆದಿದ್ದಾರೆ. ವಿಶ್ವದಾಖಲೆಯಲ್ಲಿ 2 ಲಕ್ಷಕ್ಕೂ ಅಧಿಕ ಸೂರ್ಯ ನಮಸ್ಕಾರವನ್ನು ಮಾಡಿದ್ದಾರೆ ಸಂದೀಪ್. ಈ ದಾಖಲೆ ನಿರ್ಮಿಸಲು ಸಂದೀಪ್ ಐದು ದಿನಗಳ ಮೊದಲೇ ಊಟ ಬಿಟ್ಟು ಬರೀ ಜ್ಯೂಸ್ ಕುಡಿಯುತ್ತಿದ್ದರು. ಅಮೆರಿಕಾದಿಂದ ಬಂದ ತಂಡ ಈ ಸೂರ್ಯ ನಮಸ್ಕಾರವನ್ನು ವಿಶ್ವ ದಾಖಲೆಯಲ್ಲಿ ಸೇರಿಸಿದರು.