ಕಂಕುಳಲ್ಲಿ ಮುದ್ದಾದ ಮಗು, ಕೈಯಲ್ಲಿ ಬ್ಯಾಗ್... ಗುಜರಾತ್ ಟು ಯುಪಿವರೆಗೆ ಮಹಿಳೆ ನಡಿಗೆ!
ಇಂದೋರ್: ದೇಶಾದ್ಯಂತ ಹೇರಿಕೆ ಮಾಡಿರುವ ಲಾಕ್ಡೌನ್ ತಂದಿಟ್ಟಿರುವ ಅವಾಂತರ ಅಷ್ಟಿಷ್ಟಲ್ಲ. ಅನೇಕರು ಒಂದೊತ್ತಿನ ಊಟಕ್ಕೂ ತೊಂದರೆ ಅನುಭವಿಸುವಂತಾಗಿದೆ. ಇದರ ಮಧ್ಯೆ ಮಹಿಳೆಯೊಬ್ಬಳು ಗುಜರಾತ್ನ ಸೂರತ್ನಿಂದ ಉತ್ತರಪ್ರದೇಶದ ಅಲಹಾಬಾದ್ಗೆ ನಡೆದುಕೊಂಡು ಹೊಗ್ತಿದ್ದು, ಕಂಕುಳಲ್ಲಿ ಮಗು ಹಾಗೂ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಪ್ರಯಾಣ ಬೆಳೆಸಿದ್ದಾಳೆ. ಈ ವೇಳೆ ಇಂದೋರ್ನಲ್ಲಿ ಮಾತನಾಡಿರುವ ಮಹಿಳೆ ಅಲ್ಲೇ ಉಳಿದುಕೊಂಡು ಜೀವನ ನಡೆಸಲು ತನ್ನ ಬಳಿ ಹಣವಿಲ್ಲದ ಕಾರಣ ಈ ನಿರ್ಧಾರ ಕೈಗೊಂಡಿದ್ದು, ತನ್ನೊಂದಿಗೆ 14 ಜನರು ನಡೆದುಕೊಂಡು ಬರ್ತಿದ್ದಾರೆ ಎಂದಿದ್ದಾಳೆ.