ಶೌಚಾಲಯ ಸ್ವಚ್ಛಗೊಳಿಸಿದ ಮಧ್ಯಪ್ರದೇಶದ ಇಂಧನ ಸಚಿವ ; ವಿಡಿಯೋ - ಶೌಚಾಲಯದ ಸ್ವಚ್ಛತೆ
ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ವಿಭಿನ್ನ ಸೇವೆಗಳ ಮೂಲಕವೇ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದು, ಇದೀಗ ಸ್ವಚ್ಛತಾ ಕಾರ್ಯದಲ್ಲಿ ಸುದ್ದಿಯಾಗಿದ್ದಾರೆ. ಗ್ವಾಲಿಯರ್‌ನ ಕಮಿಷನರ್ ಕಚೇರಿಯಲ್ಲಿರುವ ಶೌಚಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಅಲ್ಲಿದ್ದ ಅಧಿಕಾರಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಕಮಿಷನರ್ ಕಚೇರಿಗೆ ತೋಮರ್ ಭೇಟಿ ನೀಡಿದ್ದ ವೇಳೆ ಮಹಿಳೆಯೋರ್ವರು ಶೌಚಾಲಯವನ್ನು ಕ್ಲೀನ್ ಮಾಡಿಲ್ಲ ಎಂದು ಸಚಿವರನ್ನು ದೂರಿದ್ದಾರೆ. ಕೂಡಲೇ ಅವರು ಸ್ವಚ್ಛತಾ ಪರಿಕರಗಳನ್ನು ತರಿಸಿಕೊಂಡು ಟಾಯ್ಲೆಟ್ ಸ್ವಚ್ಛಗೊಳಿಸಿದ್ದಾರೆ.