ವಿಡಿಯೋ: ಶಾಸಕರ ಜೊತೆ ಪ್ಯಾರ್‌ನಲ್ಲಿ ಬಿದ್ದ ಯುವತಿಯ ಹೈಡ್ರಾಮ - ಶಾಸಕ ಮುಖೇಶ್ ಕುಮಾರ್ ಪಾಲ್
ಅಂಗುಲ್(ಒಡಿಶಾ): ಕಳೆದ ಮೂರು ತಿಂಗಳ ಹಿಂದೆ ನನ್ನನ್ನು ಮದುವೆಯಾಗುವುದಾಗಿ ಶಾಸಕರು ಭರವಸೆ ನೀಡಿದ್ದರು. ಆದರೀಗ ಅವರು ತಮ್ಮ ಮಾತು ಪಾಲಿಸುತ್ತಿಲ್ಲ ಎಂದು ಇಲ್ಲಿನ ಶಾಸಕರ ಮನೆಗೆ ಆಗಮಿಸಿದ ವಿದ್ಯಾರ್ಥಿನಿಯೋರ್ವಳು ಆರೋಪಿಸಿದ್ದಾಳೆ. ಒಡಿಶಾದ ಪಲ್ಲಹರಾದ ಬಿಜೆಡಿ ಶಾಸಕ ಮುಖೇಶ್ ಕುಮಾರ್ ಪಾಲ್ ಮನೆಯಲ್ಲಿ ಈ ಘಟನೆ ನಡೆಯಿತು. ಮಯೂರ್ಭಂಜ್ ಜಿಲ್ಲೆಯ ನಿವಾಸಿ ಹಾಗೂ ಕಾನೂನು ವಿದ್ಯಾರ್ಥಿನಿ ಮಾತನಾಡಿ, ಒಂದು ವೇಳೆ ಅವರು ನನ್ನೊಂದಿಗೆ ಮದುವೆಯಾಗದಿದ್ದರೆ ಶಾಸಕರ ಮನೆಯಲ್ಲೇ ವಾಸ್ತವ್ಯ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾಳೆ. ಶಾಸಕ ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಆಕೆಯನ್ನು ಠಾಣೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಪೊಲೀಸರು ಆಕೆಯನ್ನು ಮನೆಗೆ ಬಿಟ್ಟು ಬಂದಿದ್ದಾರೆ ಎಂದು ತಿಳಿದು ಬಂದಿದೆ.