ರಾಷ್ಟ್ರಪತಿ ಯಾಕೆ? ಪ್ರಧಾನಿ ಯಾಕೆ ಆಗಲ್ಲ: ವಿದ್ಯಾರ್ಥಿಗೆ ಪ್ರಶ್ನೆ ಮಾಡಿದ ನಮೋ! - ಪ್ರಧಾನಿ ಮೋದಿ
ಬೆಂಗಳೂರು: ಇಸ್ರೋ ಬಾಹ್ಯಾಕಾಶ್ಯ ಸಂಸ್ಥೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಕೆಲ ಹೊತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ, ವಿದ್ಯಾರ್ಥಿವೋರ್ವ ನಾನು ದೇಶದ ರಾಷ್ಟ್ರಪತಿಯಾಗಬೇಕು ಎಂದುಕೊಂಡಿರುವೆ. ಅದಕ್ಕೆ ಯಾವ ರೀತಿಯಾಗಿ ತಯಾರಿ ನಡೆಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಪ್ರಧಾನಿ, ರಾಷ್ಟ್ರಪತಿ ಯಾಕೆ? ಪ್ರಧಾನಿ ಯಾಕೆ ಆಗಲ್ಲ ಎಂದು ಮರುಪ್ರಶ್ನೆ ಹಾಕಿ ಮುಗುಳ್ನಗೆ ನಕ್ಕರು.