ಪ.ಬಂಗಾಳ: ಜಾನಪದ 'ಬೌಲ್ ಗಾಯನ' ಆಲಿಸಿದ ಅಮಿತ್ ಶಾ - Amit Shah visits West Bengal
ಕೊಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ತನ್ನ ಪ್ರವಾಸದ ಎರಡನೇ ದಿನವಾದ ಇಂದು ಹಲವು ಕಾರ್ಯಕ್ರಮಗಳ ಒತ್ತಡದ ನಡುವೆಯೂ, ಬಿರ್ಭಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೆಲ ಹೊತ್ತು ಜಾನಪದ 'ಬೌಲ್ ಗಾಯನ' ಆಲಿಸಿದರು. ಭಿರ್ಮಮ್ನ ಬೌಲ್ ಗಾಯಕ ಬಸುದೇಬ್ ದಾಸ್ ನಿವಾಸದಲ್ಲಿ ಮಧ್ಯಾಹ್ನದ ಭೋಜನ ಸೇವಿಸಿದ ಅವರು, ಬಳಿಕ ಕೆಲ ಹೊತ್ತು ಬೌಲ್ ಗಾಯನ ಆಲಿಸಿ ಖುಷಿಪಟ್ಟರು. ಸ್ಥಳೀಯ ಬಿಜೆಪಿ ನಾಯಕರು ಸಾಥ್ ನೀಡಿದರು.