ಸಂಸತ್ - ವಿಧಾನಸಭೆಯಲ್ಲಿ ನಮಗೆ ಶೇ.50ರಷ್ಟು ಮೀಸಲಾತಿ ಬೇಕು: ಪ್ರಿಯಾಂಕಾ ಚರ್ತುರ್ವೇದಿ - ಪ್ರಿಯಾಂಕಾ ಚರ್ತುರ್ವೇದಿ
ನವದೆಹಲಿ: 24 ವರ್ಷಗಳ ಹಿಂದೆ ನಾವು ಸಂಸತ್ತಿನಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿಗಾಗಿ ಬೇಡಿಕೆ ಇಟ್ಟಿದ್ದೇವು. ಇಂದು 24 ವರ್ಷಗಳ ಬಳಿಕ ಈ ಮೀಸಲಾತಿ ಪ್ರಮಾಣವನ್ನ ಶೇ.50ಕ್ಕೆ ಏರಿಕೆ ಮಾಡಬೇಕು ಎಂದು ರಾಜ್ಯಸಭೆ ಸಂಸದೆ ಮತ್ತು ಶಿವಸೇನೆ ಮುಖಂಡೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ. ಬಜೆಟ್ ಅಧಿವೇಶನದ ಎರಡನೇ ಸೆಷನ್ ಇಂದಿನಿಂದ ಆರಂಭಗೊಂಡಿದ್ದು, ಈ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಸಂಸತ್ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದಾರೆ.