ಬೈಕ್ ಸ್ಟಂಟ್ ಮಾಡ್ತಿದ್ದ ವೇಳೆ ಆಕ್ಷೇಪ... ಯುವಕನನ್ನ ಕೊಲೆಗೈದ ದುಷ್ಕರ್ಮಿಗಳು! - ಯುವಕನನ್ನ ಕೊಲೆಗೈದ ದುಷ್ಕರ್ಮಿಗಳು
ನವದೆಹಲಿ: ಬೈಕ್ ಸ್ಟಂಟ್ ಮಾಡ್ತಿದ್ದ ವೇಳೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ 24 ವರ್ಷದ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನವದೆಹಲಿಯ ರಘುಬೀರ್ ಪ್ರದೇಶದಲ್ಲಿ ಬೈಕ್ ಸ್ಟಂಟ್ ಮಾಡ್ತಿದ್ದ ವೇಳೆ ಅದಕ್ಕೆ ಯುವಕ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ.
Last Updated : Jul 13, 2020, 5:52 PM IST