ಜಾರುವ ಬೆಟ್ಟದ ಮೇಲೆ ಪೂಜಾರಿಯ ಭಕ್ತಿಯ ಪರಾಕಾಷ್ಠೆ...! ಅಚ್ಚರಿ ಮೂಡಿಸುತ್ತೆ ಈ ವಿಶೇಷ ಪೂಜೆ
ಶ್ರಾವಣ ಶನಿವಾರ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುಮ್ಮೆಪಲ್ಲಿಯಲ್ಲಿ ನಡೆಯುವ ಪೂಜೆ ಭಕ್ತಾದಿಗಳ ಅಚ್ಚರಿಗೆ ಕಾರಣವಾಗುತ್ತದೆ. ಬೆಟ್ಟದ ಮೇಲೆ ದೀಪಗಳು ಹೊತ್ತಿ ಉರಿಯುತ್ತಿರುತ್ತವೆ. ಈ ದೀಪಕ್ಕೆ ಹಾಕಲಾದ ಎಣ್ಣೆ ಕಲ್ಲಿನ ಮೇಲೆಲ್ಲಾ ಬಿದ್ದು ನಡೆಯಲೂ ಆಗದಷ್ಟು ಜಾರುತ್ತಿರುತ್ತದೆ. ಇದೇ ಜಾರುವ ಕಲ್ಲಿನಲ್ಲಿ ಮೇಲಿನಿಂದ ಕೆಳಗಿರುವ ಗುಹೆಗೆ ಪೂಜಾರಿ ಸರ ಸರನೇ ಇಳಿದು ಪೂಜೆ ಸಲ್ಲಿಸುತ್ತಾರೆ. ಮತ್ತು ಅಷ್ಟೇ ವೇಗದಲ್ಲಿ ಬೆಟ್ಟದ ಮೇಲೆರುತ್ತಾರೆ. ಪೂಜೆ ಸಲ್ಲಿಸಲು ಕೆಳಗಿಳಿಯುವ ಸಂದರ್ಭದಲ್ಲಿ ಪೂಜಾರಿಯ ಒಂದು ಕೈಯಲ್ಲಿ ಗಂಟೆ ಹಾಗೂ ಆರತಿ ತಟ್ಟೆ ಇದ್ದರೆ ಇನ್ನೊಂದರಲ್ಲಿ ತೆಂಗಿನಕಾಯಿ ಇರುತ್ತದೆ. ಸೇರಿರುವ ಭಕ್ತಾದಿಗಳಿಗೆ ಇದು ಅಚ್ಚರಿಯ ಜೊತೆಗೆ ದೇವರ ಮೇಲಿನ ಭಕ್ತಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡುತ್ತದೆ.