VIDEO: ಸರ್ಕಾರಿ ಬಸ್ ಏರಿದ ತಮಿಳುನಾಡು ಸಿಎಂ ಸ್ಟಾಲಿನ್... ಪ್ರಯಾಣಿಕರಿಗೆ ಅಚ್ಚರಿ - ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್
ಚೆನ್ನೈ (ತಮಿಳುನಾಡು): ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಯೋಜನೆ ಜಾರಿಗೆ ತಂದಿದೆ. ಆರನೇ ಬೃಹತ್ ವ್ಯಾಕ್ಸಿನೇಷನ್ ಅಭಿಯಾನದ ಅಂಗವಾಗಿ ನಿನ್ನೆ ಕೆಲವು ಲಸಿಕಾ ಕೇಂದ್ರಗಳನ್ನು ಪರಿಶೀಲಿಸಲು ಹೊರಟಿದ್ದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಚೆನ್ನೈನ ಕನ್ನಗಿ ನಗರದಲ್ಲಿ ಸಾರ್ವಜನಿಕ ಬಸ್ ಹತ್ತಿ, ಮಹಿಳೆಯರ ಬಳಿ ಉಚಿತ ಪ್ರಯಾಣದ ಸದುಪಯೋಗದ ಬಗ್ಗೆ ಕೇಳಿದ್ದಾರೆ. ಬಸ್ ಒಳಗೆ ಸಿಎಂ ಅವರನ್ನು ಪ್ರಯಾಣಿಕರು ಸ್ವಾಗತಿಸಿಕೊಂಡಿದ್ದಾರೆ. ಇನ್ನು ಕೆಲವರು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.