ಪ್ಲೈವುಡ್ ಫಾರ್ಮ್‌ನಲ್ಲಿ ಇದ್ದಕ್ಕಿದ್ದಂತೆ ಸ್ಫೋಟ; ತಂದೆ-ಮಗನ ಸಾವು - ಪ್ಲೈವುಡ್ ಕಂಪನಿಯಲ್ಲಿ ಸ್ಫೋಟ
ಕೃಷ್ಣ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿನ ಪ್ಲೈವುಡ್ ಕಂಪನಿಯೊಂದರಲ್ಲಿ ಹಠಾತ್ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ತಂದೆ - ಮಗ ಇಬ್ಬರೂ ಮೃತಪಟ್ಟಿದ್ದಾರೆ. ಘಟನೆಯ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಫೋಟದ ತೀವ್ರತೆಯಿಂದ ತಂದೆ ಕೋಟೇಶ್ವರಾವ್ ಹಾಗೂ ಮಗ ಚಿನ್ನರಾವ್ ಸ್ಥಳದಲ್ಲೇ ಮೃಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗನ್ನವರಂ ವಲಯದ ಸುರಂಪಲ್ಲಿ ಪ್ಲೈವುಡ್ ಫಾರ್ಮ್‌ನಲ್ಲಿ ತಂದೆ-ಮಗ ಇಬ್ಬರೂ ರಾಸಾಯನಿಕಯುಕ್ತ ಖಾಲಿ ಡಬ್ಬಿಗಳನ್ನು ಸರಕು ಸಾಗಣೆ ಮಾಡುತ್ತಿದ್ದರು. ಈ ವೇಳೆ ಹಠಾತ್ ಸ್ಫೋಟ ಸಂಭವಿಸಿದೆ ಎನ್ನಲಾಗುತ್ತಿದೆ. ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಎನ್ಡಿಆರ್ಎಫ್ ತಂಡ ಪರಿಶೀಲನೆ ನಡೆಸಿದೆ. ಹೆಚ್ಚಿನ ತನಿಖೆಗಾಗಿ ಎಸ್ಐಟಿ ರಚಿಸಲಾಗಿದೆ.